ನಮಸ್ಕಾರ. ನಮ್ಮ ಬ್ಲಾಗಿಗೆ ನಲ್ಬರವು. ಏಳು ದೇಹ ಒಂದು ಮನೆ (ಆತ್ಮಗಳು ಬೇರೆ ಬೇರೆ) ಯಲ್ಲಿರುವ ಜೀವದ ಗೆಳೆಯರು ನಾವು. ಈ ಬ್ಲಾಗಿನ ತಲೆಬರಹದಲ್ಲಿರುವಂತೆ ರುಶಿಗಳಲ್ಲ.ಅದು ನಮ್ಮ ಗುಂಪಿಗೆ ನಾವೇ ಕಂಡುಕೊಂಡ ಹೆಸರು. ನಾವು ಸಾಮಾನ್ಯರಲ್ಲಿ ಸಾಮಾನ್ಯರು. ನಿಮ್ಮ ನಡುವೆಯೇ ಕಾಣಸಿಗುವ ಹುಡುಗರು.
ನಾವೆಲ್ಲ ಒಟ್ಟಾಗಿದ್ದು ವಿಜಯಪುರದ (ಬಿಜಾಪುರ) SECABನ ಇಂಜಿನಿಯರಿಂಗ್ ಕಾಲೇಜಿನಲ್ಲಿ.
ಸ್ವಲ್ಪವೂ ಇಶ್ಟವಿಲ್ಲದ ಇಂಜಿನಿಯರಿಂಗನ್ನು ಕಶ್ಟಪಟ್ಟು ಓದುವಾಗ ಬರಿ ಸಾಮಾನ್ಯ ಗೆಳೆಯರಾಗಿದ್ದ ನಾವು, ಜೀವದ ಗೆಳೆಯರಾಗಿದ್ದು ದುಡಿಯಲು ಬೆಂದಕಾಳೂರಿಗೆ ಬಂದಾಗಲೇ... ಒಂದೇ ಸೂರಿನಡಿ ಇರಲು ಶುರುಮಾಡಿದಾಗಲೇ. ಸಾದಾರಣವಾಗಿ ಗೆಳೆತನ ಗಟ್ಟಿಯಾಗಿರುವುದು ಇಬ್ಬರ ನಡುವೆ, ಹೆಚ್ಚೆಂದರೆ ಮೂರು ಜನರ ನಡುವೆ. ನಮ್ಮಹಾಗೆ ಏಳು ಜನರ ನಡುವೆ ಇರುವ ಗಟ್ಟಿ ಗೆಳೆತನ ವಿರಳ. ಇದು ನಮಗೆ ಹೆಮ್ಮೆಯ ವಿಶಯ. ನಮ್ಮೆಲ್ಲರ ವಿಚಾರದಾರೆ, ಗುಣಗಳು ಬೇರೆ ಬೇರೆ. ಒಬ್ಬರ ಬೆನ್ನಹಿಂದೊಬ್ಬರು ಬೈದುಕೊಂಡರೂ, ಜಗಳಾಡಿದರೂ, ಒಬ್ಬರನೊಬ್ಬರು ಒಪ್ಪಿಕೊಂಡಿರುವುದರಿಂದ ಹಾಗೂ ನಮ್ಮೆಲ್ಲರ ಹೊಂದಾಣಿಕೆ ಗುಣದಿಂದಲೇ ನಾವೆಲ್ಲಾ ಒಟ್ಟಾಗಿರುವುದು. ನಮ್ಮ ಹೊಂದಾಣಿಕೆ ಯಾವ ದಂಪತಿಗಳಿಗಾದರೂ ಮಾದರಿಯಾಗಬಲ್ಲದು!
ನಾವು ಬೆಂಗಳೂರಿಗೆ ಬಂದು ಈಗಾಗಲೇ ಆರು ಏಡುಗಳು ಸಂದಿವೆ. ಈ ಬ್ಲಾಗಿನ ಮೂಲಕ ಇಶ್ಟು ದಿನಗಳಲ್ಲಿ ನಮಗಾದ ಸ್ವಾರಸ್ಯಕರ, ಹಾಸ್ಯಬರಿತ ಅನುಬವಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಇತರರಿಗೂ ಇದೇ ತೆರನಾದ ಅನುಬವಗಳಾಗಿರಬಹುದು, ಆದರೆ ನಮ್ಮ ಹಾಸ್ಯ ಪ್ರಗ್ನೆಯಿಂದ ಅವು ವಿಶೇಶ ಎನಿಸುತ್ತವೆ.
ಓದಿ, ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಮ್ಮ ತಿಟ್ಟಗಳೊಂದಿಗೆ ನಮ್ಮ ಹೆಸರುಗಳನ್ನು ಕೆಳಗೆ ಕಾಣಬಹುದು.
 |
| ಬಸು |
 |
| ಶಿವು |
 |
| ಗೋಪಿ |
 |
| ಮಂಜು |
 |
| ಗೌಡಾ |
|
| ಚಿಲ್ಲಿ |
 |
| ಸಿದ್ದು |
This comment has been removed by a blog administrator.
ReplyDeleteThis comment has been removed by the author.
ReplyDeleteThis comment has been removed by the author.
ReplyDelete